
ಶಿವಮೊಗ್ಗ : ಭಾರತದ ಜನಗಣತಿ-2027ರ ಅಂಗವಾಗಿ ಕರ್ನಾಟಕದಲ್ಲಿ ಮೊದಲ ಹಂತದ ‘ಮನೆಗಳ ಪಟ್ಟಿ ಮತ್ತು ಮನೆ ಗಣತಿ’ ಪ್ರಕ್ರಿಯೆಯು ದಿನಾಂಕ 16.04.2026 ರಿಂದ 15.05.2026 ರವೆರೆಗೆ ನಡೆಯಲಿದೆ ಎಂದು ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದ್ದಾರೆ.
ಒಟ್ಟು 30 ದಿನಗಳ ಕಾಲ ನಡೆಯುವ ಈ ಗಣತಿಯಲ್ಲಿ ಮನೆಗಳ ಸ್ಥಿತಿಗತಿ, ಲಭ್ಯವಿರುವ ಸೌಲಭ್ಯಗಳು ಹಾಗೂ ಆಸ್ತಿಪಾಸ್ತಿಗಳ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ದಿ: 1-04-2026 ರಿಂದ 15-04-2026 ರವರೆಗೆ ‘ಸ್ವಯಂ ಗಣತಿ’ ಆಯ್ಕೆ ಲಭ್ಯವಿದೆ.
ಸ್ವಯಂ ಗಣತಿ ಮಾಡುವ ವಿಧಾನ ಹೇಗೆ?
ಗಣತಿದಾರರು ಮತ್ತು ಮೇಲ್ವಿಚಾರಕರ ಕ್ಷೇತ್ರ ಭೇಟಿ :
ಏಪ್ರಿಲ್ 16 ರಿಂದ ಮೇ 15 ರವರೆಗೆ ಗಣತಿದಾರರು ಪ್ರತಿಯೊಂದು ಮನೆಗೆ ಭೇಟಿ ನೀಡಲಿದ್ದಾರೆ. ಈಗಾಗಲೇ ಸ್ವಯಂ ಗಣತಿ ಮಾಡಿಕೊಂಡವರು ತಮ್ಮಲ್ಲಿರುವ ಎಸ್ ಇ ಐಡಿ ಅನ್ನು ಗಣತಿದಾರರಿಗೆ ತೋರಿಸಿ ದತ್ತಾಂಶವನ್ನು ಪರಿಶೀಲಿಸಿಕೊಳ್ಳಬಹುದು. ಒಂದು ವೇಳೆ ಸ್ವಯಂ ಗಣತಿ ಮಾಡದಿದ್ದಲ್ಲಿ, ಗಣತಿದಾರರೇ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಹಿತಿಯನ್ನು ಸಂಗ್ರಹಿಸುತ್ತಾರೆ.
ಸಾರ್ವಜನಿಕರು, ಅಧಿಕಾರಿಗಳು, ಮತ್ತು ಸಿಬ್ಬಂದಿಗಳು https://se.census.gov.in ವೆಬ್‌ಸೈಟ್‌ಗೆ ಭೇಟಿ ನೀಡಿ ಸ್ವಯಂ ಗಣತಿಯಲ್ಲಿ ಭಾಗವಹಿಸುಂತೆ ಜಿಲ್ಲಾಡಳಿತ ಕೋರಿದೆ.
ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ತಾಲೂಕು ಆಡಳಿತ, ಸ್ಥಳೀಯ ಸಂಸ್ಥೆ ಅಥವಾ ಜಿಲ್ಲಾಡಳಿತದ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ » ಕುವೆಂಪು ವಿವಿ ಪ್ರಭಾರ ಕುಲಸಚಿವರಾಗಿ ಜಿಪಂ ಸಿಇಓ ಎನ್. ಹೇಮಂತ್ ನೇಮಕ