
ಶಿವಮೊಗ್ಗ : ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವ ಎ.ಎಲ್.ಮಂಜುನಾಥ್ ವರ್ಗಾವಣೆಯಾಗಿದ್ದು, ಇದರ ಬೆನ್ನಲ್ಲೆ ತೆರವಾದ ಸ್ಥಾನದ ಪ್ರಭಾರ ಜವಾಬ್ದಾರಿಯನ್ನು ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ಎನ್.ಹೇಮಂತ್ ರವರಿಗೆ ವಹಿಸಲಾಗಿದೆ.
ಇದನ್ನೂ ಓದಿ » ಇಂದು ಶಿಕಾರಿಪುರದ ಶ್ರೀ ಹುಚ್ಚರಾಯ ಸ್ವಾಮಿ ಬ್ರಹ್ಮ ರಥೋತ್ಸವ
ಕೆಎಎಸ್ ಅಧಿಕಾರಿಯಾಗಿದ್ದ ಎ.ಎಲ್.ಮಂಜುನಾಥ್ ಅವರನ್ನು ವರ್ಗಾವಣೆ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅಧೀನ ಕಾರ್ಯದರ್ಶಿ ಮಂಗಳವಾರ ಆದೇಶಿಸಿದ್ದರು. ಅವರು ತಮ್ಮ ಸ್ಥಾನದಿಂದ ಬಿಡುಗಡೆಯಾಗಿದ್ದು, ಆ ಜಾಗಕ್ಕೆ ಜಿಲ್ಲಾ ಪಂಚಾಯತ್ ಸಿಇಓ ಎನ್.ಹೇಮಂತ್ ಅವರನ್ನು ನಿಯೋಜಿಸಿ ಸರ್ಕಾರ ಆದೇಶಿಸಿದೆ.