
ಶಿವಮೊಗ್ಗ : ಹಿರಿಯ ರಾಜಕಾರಣಿ, ಮಾಜಿ ಉಪ ಮುಖ್ಯಮಂತ್ರಿ ಹಾಗೂ ರಾಷ್ಟ್ರ ಭಕ್ತರ ಬಳಗದ ರಾಜ್ಯ ಸಂಚಾಲಕ ಕೆ.ಎಸ್.ಈಶ್ವರಪ್ಪ ಅವರು ಜೂ.10 ರಂದು ಬುಧವಾರ 78ನೇ ಹುಟ್ಟು ಹಬ್ಬ ಆಚರಿಸಿಕೊಂಡರು. ಅವರ ಜನ್ಮ ದಿನವನ್ನು ಅರ್ಥಪೂರ್ಣವಾಗಿಸುವ ನಿಟ್ಟಿನಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳು ನಡೆದವು.
ಇದನ್ನೂ ಓದಿ » ನಾಳೆ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರ 78 ನೇ ಹುಟ್ಟುಹಬ್ಬ, ಅರ್ಥಪೂರ್ಣ ಆಚರಣೆಗೆ ಅಭಿಮಾನಿ ಬಳಗ ಸಜ್ಜು
ಮುಖ್ಯಾಂಶಗಳು :

ಕೆ.ಎಸ್.ಈಶ್ವರಪ್ಪ ಅಭಿಮಾನಿ ಬಳಗದ ಸಹಕಾರ ದೊಂದಿಗೆ ಶ್ರೀಗಂಧ ಸಂಸ್ಥೆ, ಶ್ರೀ ಮಾರಿಕಾಂಬ ಮೈಕ್ರೋ ಫೈನಾನ್ಸ್ ಪ್ರೆವೈಟ್ ಲಿಮಿಟೆಡ್ ವತಿ ಯಿಂದ ಕೆ.ಎಸ್. ಈಶ್ವರಪ್ಪ ಅವರ ನಿವಾಸವಿರುವ ಶಿವಮೊಗ್ಗದ ಮಲ್ಲೇಶ್ವರ ನಗರದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ, ಸಾಮೂಹಿಕ ರುದ್ರ ಪಠಣ, ಮಂಗಳ ನಿಧಿ ಸಮರ್ಪಣೆ, ಸಂಗೀತಾಭಿವಂದನೆ ಸಮೂಹ ಗಾಯನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಗಳಿಗೆ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರ ಸನ್ನತೀರ್ಥ ಸ್ವಾಮೀಜಿ ಚಾಲನೆ ನೀಡಿ, ಆಶೀರ್ವಚನ ನೀಡಿದರು.
ತತ್ವ, ಧರ್ಮ ಮತ್ತು ಸಮಾಜ ಸೇವೆಯ ವಿಷಯ ದಲ್ಲಿ ಕೆ.ಎಸ್.ಈಶ್ವರಪ್ಪನವರು ಎಂದಿಗೂ ರಾಜಿ ಮಾಡಿಕೊಂಡಿಲ್ಲ. ಅವರು ಸ್ಥಾನಮಾನ ಬಿಟ್ಟಿರಬಹುದು, ಆದರೆ ತಮ್ಮ ತತ್ವ ಮತ್ತು ಧರ್ಮವನ್ನು ಎಂದಿಗೂ ಬಿಟ್ಟಿಲ್ಲ.
– ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಮಾದಾರ ಚೆನ್ನಯ್ಯ ಗುರುಪೀಠ
78ರ ವಯಸ್ಸಿನಲ್ಲೂ 28ರ ಯುವಕರ ಉತ್ಸಾಹದಿಂದ ಸಮಾಜ ಸೇವೆಯಲ್ಲಿ ತೊಡಗಿರುವ ಈಶ್ವರಪ್ಪ ನವರು ಎಲ್ಲರಿಗೂ ಪ್ರೇರಣೆಯಾಗಿದ್ದಾರೆ. ಮುಂದಿನ ದಿನದಲ್ಲಿ ಸರ್ಕಾರದ ನೇತೃತ್ವ ವಹಿಸುವ ಭಾಗ್ಯವನ್ನು ಪರಮಾತ್ಮ ಕರುಣಿಸಲಿ.
– ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಪೇಜಾವರ ಮಠ

‘ಸಭಾಂಗಣ ಪ್ರವೇಶಿಸುವಾಗ ಪ್ಲೆಕ್ಸ್‌ನಲ್ಲಿ 78 ನೇ ಹುಟ್ಟುಹಬ್ಬ ಎಂದು ನೋಡಿದಾಗ ಅದು ತಪ್ಪಿರಬಹುದು ಎಂದು ಅನಿಸಿತು. ಏಕೆಂದರೆ ಈಶ್ವರಪ್ಪನವರು 28ರ ಯುವಕರಂತೆ ಸಮಾಜಕ್ಕಾಗಿ ನಿರಂತರವಾಗಿ ಕ್ರೀಯಾಶೀಲರಾಗಿದ್ದಾರೆ. ಧರ್ಮ, ಹಿಂದುತ್ವ ಹಾಗೂ ಸಮಾಜ ಸೇವೆಯ ವಿಚಾರದಲ್ಲಿ ಅವರು ತಮ್ಮ ಜೀವನವನ್ನು ಸಮರ್ಪಿಸಿಕೊಂಡಿದ್ದಾರೆ’ ಎಂದು ಶ್ಲಾಘಿಸಿದರು.
ಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಬಸವ ಮೂರ್ತಿ ಮಾದರ ಚೆನ್ನಯ್ಯ ಶ್ರೀಗಳು ಮಾತನಾಡಿ, “78ರ ವಯಸ್ಸಿನಲ್ಲಿಯೂ ಈಶ್ವರಪ್ಪನವರ ಕ್ರೀಯಾ ಶೀಲತೆ ಮತ್ತು ಮಾನಸಿಕ ಸದೃಢತೆ ಯುವಕರಿಗೆ ಮಾದರಿಯಾಗಿದೆ. ಅವರು ಸ್ಥಾನಮಾನ ಬಿಟ್ಟಿರಬಹು ದು. ಆದರೆ ತಮ್ಮ ತನ್ನ ಮತ್ತು ಧರ್ಮವನ್ನು ಎಂದಿಗೂ ಬಿಟ್ಟಿಲ್ಲ. ಅವರು ಶತಾಯುಷಿಗಳಾಗಿ ಬದುಕಿ-ಬಾಳಲಿ. ಇನ್ನೂ ಹೆಚ್ಚಿನ ದೇಶ ಸೇವೆ ಮಾಡಲಿ” ಎಂದು ಹೇಳಿದರು.
ಬೆಕ್ಕಿನಕಲ್ಕತದ ಡಾ. ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಶ್ರೀಗಳು ಮಾತನಾಡಿ, ”ಜೀವನವನ್ನು ಸಮಾಜ ಮತ್ತು ಸಕಲ ಜೀವಿಗಳ ಒಳಿತಿಗಾಗಿ ಮೀಸಲಿಟ್ಟಾಗ ಮಾತ್ರ ಜನ್ಮ ಸಾರ್ಥಕವಾಗುತ್ತದೆ. ಈಶ್ವರಪ್ಪನ ವರುಗೋಸಂರಕ್ಷಣೆ ಸೇರಿದಂತೆ ಹಲವು ಸಮಾಜಮುಖ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಆದಿ ಚುಂಚನಗಿರಿ ಶಾಖಾ ಮತದ ಶ್ರೀ ನಾದಮ ಯಾನಂದನಾಥ ಸ್ವಾಮೀಜಿ ಮಾತನಾಡಿ, ಅವರು, ‘ದಾನ-ಧರ್ಮ ಮತ್ತು ಸಮಾಜಸೇವೆಯ ಮೂಲಕ ಗಳಿಸಿದ ಹೆಸರು ಶಾಶ್ವತವಾಗಿರುತ್ತದೆ. ಈಶ್ವರಪ್ಪನವರ ಸೇವಾ ಕಾರ್ಯಗಳೇ ಅವರಿಗೆ ಜನಮಾನಸದಲ್ಲಿ ವಿಶಿಷ್ಟ ಸ್ಥಾನ ಕಲ್ಪಿಸಿವೆ” ಎಂದರು.

ಆರ್‌ಎಸ್‌ಎಸ್ ಮುಖಂಡ ಪಟ್ಟಾಭಿ ಅವರು ಮಂಗಳನಿಧಿಯನ್ನು ಸ್ವೀಕರಿಸಿ ಮಾತನಾಡಿದರು. ”ಸಮಾಜದತ್ತ ಕೃತಜ್ಞತೆಯ ಸಂಕೇತವಾಗಿ ಈಶ್ವರಪ್ಪ ನವರ ಕುಟುಂಬ ಮಂಗಳನಿಧಿಯನ್ನು ಸಮರ್ಪಿಸಿದ್ದು, ಅದನ್ನು ಮಂಗಳ ಕಾರ್ಯಗಳಿಗೆ ಬಳಸಲಾಗುವುದು” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ 500ಕ್ಕೂ ಹೆಚ್ಚು ಮಾತೆಯರಿಂದ ಭಕ್ತಿಗೀತೆ ಮತ್ತು ದೇಶಭಕ್ತಿಗೀತೆ, ಸಾಮೂಹಿಕ ಗಾಯನ ನಡೆಯಿತು.
ಈ ಸಂದರ್ಭದಲ್ಲಿ ಬಿಳಿಕಿ ಮತದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಹಲವಾರು ಶ್ರೀ ಗಳು ಸಾನ್ನಿಧ್ಯ ವಹಿಸಿದ್ದರು. ವಿಧಾನಪರಿಷತ್ ಸದಸ್ಯ ಡಿ.ಎಸ್. ಅರುಣ್, ಮುಖಂಡರಾದ ಬಿ.ಕೆ.ಮೋಹನ್ ಕುಮಾರ್, ಶ್ರೀಗಂಧ, ರಾಷ್ಟ್ರಭಕ್ತರ ಬಳಗ, ಗೋವರ್ಧನ ಟ್ರಸ್ಟ್ ಹಾಗೂ ಭಜನಾ ಪರಿಷತ್ ನ ಪದಾಧಿಕಾರಿಗಳು ಮತ್ತು ಈಶ್ವರಪ್ಪನವರ ಅಪಾರ ಅಭಿಮಾನಿಗಳು, ವಿವಿಧ ಸಂಘ-ಸಂಸ್ಥೆಗಳು ಪ್ರಮುಖರು ಭಾಗವಹಿಸಿ ಈಶ್ವರಪ್ಪನವರಿಗೆ ಶುಭಾಶಯ ಕೋರಿದರು.
