ಫಾರಂ ಹೌಸ್‌ನಿಂದ ನಾಯಿ ಹೊತ್ತೊಯ್ದ ಚಿರತೆ, ಸಿಸಿ ಟಿವಿಯಲ್ಲಿ ದೃಶ್ಯ ಸೆರೆ

ಶಿವಮೊಗ್ಗ : ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಗ್ರಾಮದಲ್ಲಿರುವ ಎಪಿಎಂಸಿ ಮಾಜಿ ನಿರ್ದೇಶಕಿ ಸುಜಾತ ಎಂಬುವರ ಟಿವಿಎಸ್ ಫಾರಂನಲ್ಲಿ ಭಾನುವಾರ ರಾತ್ರಿ ಸಾಕು ನಾಯಿಯನ್ನು ಚಿರತೆ ಹೊತ್ತೊಯ್ದಿದೆ.

ಇದನ್ನೂ ಓದಿ » ಚಲಿಸುತ್ತಿದ್ದ ರೈಲನ್ನು ಹತ್ತಲು ಯತ್ನಿಸಿದ ಪ್ರಯಾಣಿಕನನ್ನು ರಕ್ಷಿಸಿದ ಪೊಲೀಸರು, ಸಾರ್ವಜನಿಕ ವಲಯದಲ್ಲಿ ಪ್ರಶಂಸೆ!

ಇದೇ ತೋಟದಲ್ಲಿ ಕಳೆದ ಆರೇಳು ತಿಂಗಳ ಹಿಂದೆಯೂ ಇದೇ ರೀತಿಯಲ್ಲಿ ಸಾಕು ನಾಯಿಯನ್ನು ಚಿರತೆ ಹೊತ್ತು ಹೋಗಿತ್ತು. ಈಗ ಎರಡನೇ ಬಾರಿ ಘಟನೆ ನಡೆದಿದೆ. ಚಿರತೆಯು ನಾಯಿಯನ್ನು ಹೊತ್ತು ಹೋಗುವ ದೃಶ್ಯವು ಸಿಸಿ ಕ್ಯಾಮರಾದಲ್ಲಿ ಕಂಡು ಬಂದಿದೆ. ತೋಟದಲ್ಲಿ ಸುಜಾತಾ ತಮ್ಮ ರಕ್ಷಣೆಗಾಗಿ ದೊಡ್ಡ ಹೆಣ್ಣು ಕರಿ ನಾಯಿಯನ್ನು ಸಾಕಿದ್ದರು.

ಪ್ರತಿದಿನದಂತೆ ಬೆಳಗ್ಗೆ ಎದ್ದು ವಾಕಿಂಗ್ ಹೋಗಲು ಸಿದ್ದರಾಗಿ ಹೊರಗಡೆ ಬಂದು ನೋಡಿದರೆ ಎರಡು ಮರಿನಾಯಿಗಳು ಮಾತ್ರ ಇದ್ದವು. ಅನುಮಾನ ಬಂದು ಸಿಸಿ ಕ್ಯಾಮರಾ ಚೆಕ್ ಮಾಡಿದ್ದಾಗ ಬೆಳಗ್ಗಿನ ಜಾವ 2.03 ನಿಮಿಷದಲ್ಲಿ ಒಂದು ಚಿರತೆ ಬಂದು ನಾಯಿಯನ್ನು ಬಾಯಿಯಲ್ಲಿ ಕಚ್ಚಿಕೊಂಡು ಹೋಗುವ ದೃಶ್ಯ ಕಂಡುಬಂದಿದೆ.

ಅರಣ್ಯ ಇಲಾಖೆ ಬೋನು ಇಟ್ಟಿದ್ದು ಪ್ರಯೋಜನವಾಗಿಲ್ಲ. ಚಿರತೆ ಕಂಡು ಮನೆಯವರು ಹಾಗೂ ಗ್ರಾಮಸ್ಥರು ಭಯಗೊಂಡಿದ್ದಾರೆ.

ಇದನ್ನೂ ಓದಿ » ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ: ಜಿಲ್ಲೆಯಲ್ಲಿ ಉದ್ಯೋಗ ಮೇಳ, ನೇರ ಸಂದರ್ಶನದ ಮೂಲಕ ಆಯ್ಕೆ

Leave a reply

Recent Comments

No comments to show.
Join Us
  • Facebook38.5K
  • X Network32.1K
  • Behance56.2K
  • Instagram18.9K

Stay Informed With the Latest & Most Important News

Categories

Advertisement

Loading Next Post...
Sign In/Sign Up Sidebar Search
Loading

Signing-in 3 seconds...

Signing-up 3 seconds...